Elder Abuse is a Crime. The Elders Helpline works to help Elders who are harassed.

ಹಿರಿಯರ ಶೋಷಣೆಯನ್ನು  ತಡೆಗಟ್ಟುವುದು

ನೀವು ಒಬ್ಬ ಹಿರಿಯರಾಗಿದ್ದು ಶೋಷಣೆ, ನಿರ್ಲಕ್ಷ್ಯ ಅಥವಾ ದುರುಪಯೋಗಕ್ಕೆ ಒಳಗಾಗಿದ್ದರೆ ನಿಮ್ಮ ವೈದ್ಯರಿಗೆ, ಭರವಸಾರ್ಹ ಸ್ನೇಹಿತನಿಗೆ ಅಥವಾ ಕುಟುಂಬ ಸದಸ್ಯರಿಗೆ ಹೇಳಿ. ಅಥವಾ ಸಹಾಯವಾಣಿಗೆ ಕರೆ ಮಾಡಿ. ಅನೇಕ ಹಿರಿಯರು ತಮಗಾಗುವ ಶೋಷಣೆಯನ್ನು ಹೇಳಿಕೊಳ್ಳುವುದಿಲ್ಲ. ಶೋಷಣೆ ಮಾಡುವ ವ್ಯಕ್ತಿ ತನ್ನ ಮೇಲೆ ಸೇಡು ತೀರಿಸಿಕೊಳ್ಳಬಹುದು ಅಥವಾ ತನ್ನ ಸ್ವಂತ ಮನೆಯಿಂದ ತನ್ನನ್ನು ಹೊರಗೆ ಹಾಕಬಹುದು ಎಂದು ಭಯಪಡುತ್ತಾರೆ. ಆರೈಕೆ ಮಾಡುವವರು ತಮ್ಮ ಮಕ್ಕಳೇ ಆಗಿದ್ದರಂತೂ ಸ್ವಂತ ಮಕ್ಕಳೇ ಶೋಷಣೆ ಮಾಡುತ್ತಿದ್ದಾರೆ ಎಂದು ಹೇಳಿಕೊಳ್ಳಲು ನಾಚಿಕೆ ಆಗಬಹುದು. ಹಿರಿಯರ ಶೋಷಣೆಯ ಯಾವುದೇ ಪರಿಸ್ಥಿತಿಯಲ್ಲಿ ಅವರ ಸ್ವಾಯತ್ತತೆಯ ಹಕ್ಕನ್ನು ಗೌರವಿಸುವುದು ಹಾಗೂ ಅದೇ ಸಮಯದಲ್ಲಿ ಅವರಿಗೆ ಸರಿಯಾದ ಕಾಳಜಿ ಸಿಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದು ಒಂದು ಸವಾಲಾಗಿರುತ್ತದೆ

ಹಿರಿಯ ನಾಗರಿಕನ ಮೇಲೆ ಶೋಷಣೆ ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ಅದನ್ನು ತಿಳಿಸಲು ಹಿಂಜರಿಯಬೇಡಿ. ಆ ಶೋಷಣೆ ಮತ್ತೂ ಮುಂದುವರಿದಾಗ ಸತತವಾಗಿ ಕರೆ ಮಾಡಿ ತಿಳಿಸಿ. ಹಿರಿಯರು ಕ್ರಮೇಣವಾಗಿ ಸಮಾಜದಿಂದ ಪ್ರತ್ಯೇಕವಾಗುವುದರಿಂದ ಹಾಗೂ ಹೊರಗೆ ಅಷ್ಷೇನು ಕೆಲಸ ಇಲ್ಲದಿರುವುದರಿಂದ ಅವರ ಮೇಲಿನ ಶೋಷಣೆ ತುಂಬ ಸಮಯದವರೆಗೆ ಯಾರ ಗಮನಕ್ಕೂ ಬರುವುದಿಲ್ಲ.

 ಹಿರಿಯರು ಅವರಿಗೆ ಅಗತ್ಯವಿರುವ ಸಹಾಯ ಪಡೆಯಬಹುದಾದ
3 ಮಾರ್ಗಗಳು

(ಎಲ್ಲಾ ದೂರುಗಳನ್ನು ಗೌಪ್ಯವಾಗಿರಿಸಲಾಗುತ್ತದೆ.
ಸಾರ್ವಜನಿಕ ಸಾಕ್ಷಿಗಳು ಹಿರಿಯರ ಕಿರುಕುಳವನ್ನು ಅನಾಮಧೇಯವಾಗಿ ದೂರು ಸಲ್ಲಿಸಬಹುದು)

ಬೆಂಗಳೂರು ನಗರಕ್ಕೆ ಸಂಖ್ಯೆ: 1090 
ಕರ್ನಾಟಕದ ಉಳಿದ ಭಾಗಗಳಿಗೆ ಸಂಖ್ಯೆ: 14567

ಈ ಸೈಟ್ನಲ್ಲಿ
ದೂರನ್ನು ಫೈಲ್ ಮಾಡಿ

8095 00 1090 ನಲ್ಲಿ
ಸಹಾಯವಾಣಿಯನ್ನು ವಾಟ್ಸಾಪ್ ಮಾಡಿ

© ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ 2023